LRI ಕಾರ್ಡ್ ಎಂದರೇನು? ರೈತರು ತಮ್ಮ ಜಮೀನಿಗೆ ಸೂಕ್ತ ಬೆಳೆ ಮತ್ತು ಮಣ್ಣಿನ ಮಾಹಿತಿ ಹೀಗೆ ತಿಳಿಯಬಹುದು
ರೈತರು ಬೆಳೆ ಬೆಳೆಯುವಾಗ ಸಾಮಾನ್ಯವಾಗಿ ಬೀಜ, ಗೊಬ್ಬರ, ನೀರು ಮತ್ತು ಮಾರುಕಟ್ಟೆ ಬೆಲೆಯ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಆದರೆ ಅದಕ್ಕೂ ಮೊದಲು ಒಂದು ಪ್ರಮುಖ ವಿಷಯವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಅದು ನಮ್ಮ ಜಮೀನಿನ ಮಣ್ಣಿನ ಗುಣಲಕ್ಷಣ ಮತ್ತು ಆ ಜಮೀನಿಗೆ ಯಾವ ಬೆಳೆ ಹೆಚ್ಚು ಸೂಕ್ತ ಎಂಬ ಮಾಹಿತಿ . ಕರ್ನಾಟಕ ಸರ್ಕಾರದ ಜಲಾನಯನ ಅಭಿವೃದ್ಧಿ ಇಲಾಖೆಯ ಸುಜಲಾ ಯೋಜನೆಯಡಿ ಭೂ ಸಂಪನ್ಮೂಲ ಮಾಹಿತಿ ವ್ಯವಸ್ಥೆ ಅಥವಾ LRI (Land Resource Inventory) ಮೂಲಕ ರೈತರ ಜಮೀನಿನ ಬಗ್ಗೆ ಹಲವು ಮಾಹಿತಿಯನ್ನು ಒಟ್ಟಿಗೆ ನೀಡುವ ವ್ಯವಸ್ಥೆ ರೂಪಿಸಲಾಗಿದೆ. ಅಧಿಕೃತ LRI ಪೋರ್ಟಲ್‌ನಲ್ಲಿ ಪ್ರತಿ ಸಮೀಕ್ಷೆ ಸಂಖ್ಯೆಗೆ ಸಂಬಂಧಿಸಿದಂತೆ ಮಣ್ಣು, ಬೆಳೆ ಸೂಕ್ತತೆ ಮತ್ತು ಕೃಷಿ ಸಲಹೆಗಳನ್ನು ಒಳಗೊಂಡ LRI ಚೀಟಿಯನ್ನು ಡೌನ್‌ಲೋಡ್ ಮಾಡುವ ವ್ಯವಸ್ಥೆ ಇದೆ. LRI ಎಂದರೇನು? LRI ಎಂದರೆ Land Resource Inventory , ಅಂದರೆ ಭೂ ಸಂಪನ್ಮೂಲಗಳ ವಿವರವಾದ ಮಾಹಿತಿ ಸಂಗ್ರಹ. ಸರಳವಾಗಿ ಹೇಳುವುದಾದರೆ, ನಿಮ್ಮ ಜಮೀನಿನ ಮಣ್ಣು ಹೇಗಿದೆ, ಅದರ ಆಳ ಎಷ್ಟು, ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೇಗಿದೆ, ಇಳಿಜಾರು ಎಷ್ಟು, ಮಣ್ಣಿನ ಸವಕಳಿ ಹೇಗಿದೆ, ಮಣ್ಣಿನಲ್ಲಿರುವ ಪ್ರಮುಖ ಪೋಷಕಾಂಶಗಳ ಸ್ಥಿತಿ ಹೇಗಿದೆ ಮತ್ತು ಯಾವ ಬೆಳೆಗಳಿಗೆ ಆ ಜಮೀನು ಹೆಚ್ಚು ಸೂಕ್ತ ಎಂಬ ಮಾಹಿತಿಯನ್ನು ಒಟ್ಟಾಗಿ ತಿಳಿದುಕೊಳ್ಳಲು ಸಹಾಯ ಮಾಡುವ ವ್ಯವಸ್ಥೆ ಇದು. ಸುಜಲಾ LRI ಯೋಜನೆಯ ತಾ...